[Kde-l10n-kn] ಒಂದು ಸಂತೋಷದಾಯಕ ವಿಚಾರ
Umesh Rudrapatna
umeshrs at gmail.com
Mon Aug 27 19:17:15 CEST 2007
ಸ್ನೇಹಿತರೆ,
ಕಳೆದ ಗುರುವಾರ ಕೆಡಿಇ ಕೆಲಸಕ್ಕೆ ಬಹಳ ಪ್ರೋತ್ಸಾಹ ನೀಡುವಂತಹ ಘಟನೆಯೊಂದು ನಡೆಯಿತು.
ಶ್ರೀಯುತ ಶಂಭು ಹೆಸರಿನ ಕನಕಪುರದ ಬಳಿಯ ಹಳ್ಳಿಯ ಒಬ್ಬರು ಮೇಷ್ಟ್ರು ನನ್ನನ್ನು ಭೇಟಿಯಾದರು.
ಇವರು ನಾವು ಶಿಕ್ಷಕರ ಬಗ್ಗೆ ಭಾವಿಸುವಂತೆ ಕಂಪ್ಯೂಟರ್ ಅನಕ್ಷರಸ್ಥರೇನಲ್ಲ. ಮನೆಯಲ್ಲಿ
fedora core 7 ಲೈನಕ್ಸ್ ಅನುಸ್ಥಾಪನೆ ಉಳ್ಳವರು, ಲ್ಯಾಪ್ ಟಾಪ್ ಉಪಯೋಗಿಸುವವರು! ಕನಕಪುರ
ತಾಲ್ಲೂಕಿನ ಹಲವು ಹಳ್ಳಿಯ ಶಿಕ್ಷಕರು ಈಗಾಗಲೇ ಉಡಿಗಣಕಗಳನ್ನು ಬಳಸುತ್ತಿದ್ದಾರಂತೆ!, ಎಲ್ಲಾ
ಒಂದು "ಶಿಕ್ಷಣ" ಹೆಸರಿನ ಸಂಘಟನೆಯಿಂದಾಗಿ.( www.sikshana.org)
ಎಲ್ಲಕ್ಕಿಂತಲೂ ಮಿಗಿಲಾಗಿ ಇವರು ಈಗಾಗಲೇ ಕೆಲವು ಅನ್ವಯಗಳನ್ನು ಕನ್ನಡಕ್ಕೆ
ಭಾಷಾಂತರಿಸಿದ್ದಾರೆ. ಸ್ಟೆಲ್ಲೇರಿಯಂ, ಕೆ ಸ್ಟಾರ್ಸ್ ಮುಂತಾದವು. ಇವರ ಶಾಲೆಯ ಮಕ್ಕಳಿಗೂ
ಗಣಕದ ಪ್ರಭಾವ ತಟ್ಟಿದ್ದು, ಅವರು ಲೈನಕ್ಸ್ ನ ಆಟಗಳನ್ನು ಬಹಳ ಇಷ್ಟಪಡುತ್ತಾರಂತೆ. ಈ ಎಲ್ಲಾ
ಕಾರಣಗಳಿಂದಾಗಿ ಅವರಿಗೆ ಕೆಡಿಇ ಇಡಿಯು (kdeedu) ನ ಹಲವು ಅನ್ವಯಗಳನ್ನು ಕನ್ನಡೀಕರಿಸುವ
ಆಸ್ಥೆ ಇದೆ.ಅಷ್ಟೇ ಅಲ್ಲದೆ, kdebase ಅನ್ನು ಮುಗಿಸಲು ಕೈಹಾಕಲೂ ಸಿದ್ಧರಿದ್ದಾರೆ. ಅವರಿಗೂ
ಈಗ ಒಂದು ಕಡತವನ್ನು ಅಂಟಿಸಿದ್ದಾಗಿದೆ :-). ಅವರ ಜೊತೆಗೆ ಇನ್ನೂ ಹಲವು ಶಿಕ್ಷಕರನ್ನೂ ಈ
ಕೆಲಸಕ್ಕೆ ತೊಡಗಿಸುವುದರಲ್ಲಿ ಭರವಸೆಯಿಂದಿದ್ದಾರೆ. ಇದು ನಮಗೆ ನಿಜಕ್ಕೂ ಸಂತೋಷ
ನೀಡಬೇಕಾದಂತಹ ವಿಚಾರ. ಅವರೂ ನಮ್ಮ ಬಳಗಕ್ಕೆ (kde-l10n-kn) ಗೆ ಈಗಾಗಲೇ ಸೇರಿದ್ದಾರೆ.
ಅವರಿಗೆ ನಿಮ್ಮೆಲ್ಲರ ಪರವಾಗಿ ಸ್ವಾಗತವನ್ನು ಕೋರುತ್ತೇನೆ.ನಮ್ಮ ಕೆಲಸ ಸಮಯಕ್ಕೆ ಸರಿಯಾಗಿ
ಮುಗಿದಲ್ಲಿ ಅವರಿಗೆ ಬಹಳ ಪ್ರಯೋಜನಕಾರಿಯಾಗುವುದೆಂಬ ಆಶ್ವಾಸನೆಯನ್ನೂ ಅವರು ನಮಗೆ
ನೀಡಿದ್ದಾರೆ.
ಇಂತಿ,
ಉಮೇಶ
-------------- next part --------------
An HTML attachment was scrubbed...
URL: http://mail.kde.org/pipermail/kde-l10n-kn/attachments/20070827/d8047d82/attachment-0001.html
More information about the Kde-l10n-kn
mailing list