[Kde-l10n-kn] ನಮಗೊಂದು ನಿರ್ದಿಷ್ಟ ಗುರಿ
Umesh RS
umeshrs at gmail.com
Fri Jun 30 14:35:56 CEST 2006
ಸಿದ್ಧಾರೂಢರೆ,
ಎರಡು ವಿಚಾರಗಳು. .po ಕಡತ ಪೂರ್ಣಗೊಳ್ಳುವುದು ಎನ್ನುವುದನ್ನು ನೀವು ನಿಗದಿಪಡಿಸಿದ್ದ
ಗುರಿ ತಲುಪುವುದು ಎಂದು ಭಾವಿಸಿದ್ದೇನೆ :-). ಸರಿಯೆ?
ಮತ್ತೊಂದು ವಿಚಾರ. ಕಡಿಇ ಕನ್ನಡ ಆವೃತ್ತಿಯನ್ನು ಹೊರತರಲು ನಾವು ಒಂದು ನಿರ್ದಿಷ್ಟ
ಗುರಿ ಇಟ್ಟುಕೊಳ್ಳಬೇಕೆಂಬುದು ನನ್ನ ಅಭಿಪ್ರಾಯ. ನಾವು ಗುರಿ ತಲುಪುವುದು ಎಷ್ಟು
ಮುಖ್ಯವೋ, ಗುಣಮಟ್ಟವೂ ಅಷ್ಟೇ ಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾಗಿಯೂ
ನಮಗೊಂದು ಗುರಿ ಇದ್ದರೆ ಒಳಿತೆಂದು ನನ್ನ ಭಾವನೆ. ಇದು ಕೇವಲ ನನ್ನ ಅನಿಸಿಕೆಯಷ್ಟೇ.
ಇದು ಸೂಕ್ತವೆಂದು ಇತರರೂ ಭಾವಿಸಿದ ಪಕ್ಷದಲ್ಲಿ ಕಡಿಇ ೪.೦ ಅಥವಾ ಮತ್ತೇನಾದರೂ ಸೂಕ್ತ
ಗುರಿಯಾಗಬುಹುದೇ?
http://developer.kde.org/development-versions/kde-4.0-release-plan.html
ಈ ತಾಣವನ್ನು ಮತ್ತೆ ಮತ್ತೆ ಸಂದರ್ಶಿಸುತ್ತಿದ್ದರೆ ನಮ್ಮ ಕಾರ್ಯಕ್ತೆ ಒಂದು
ನಿರ್ದಿಷ್ಚ ಗುರಿ ದೊರೆಯಬಹುದೆಂದು ನನ್ನ ಅಭಿಪ್ರಾಯ.
ಇಂತಿ,
ಉಮೇಶ
More information about the Kde-l10n-kn
mailing list