[Kde-l10n-kn] About Kontact

Paresh A paresh.kalyan at gmail.com
Fri Jul 7 20:15:56 CEST 2006


ಸಿದ್ಧಾರೂಡರೇ ಮತ್ತು ಉಮೇಶರೇ,

ನಾನು ಕಾಂಟಾಕ್ಟ್-ಅನ್ನು ಅನುವಾದಿಸಲು ಕಳೆದ ಸ್ವಲ್ಪ ದಿನಗಳಿಂದ ಪ್ರಯತ್ನಿಸುತ್ತಿದ್ದೇನೆ. ಆದರೆ
ಬಹಳ ತೊಡಕುಗಳಾಗಿತ್ತಿವೆ. ಇದರ (ಕಾಂಟಾಕ್ಟ್) ಉಪಯೋಗ ನನಗೆ ಗೊತ್ತಾಗುತ್ತಿಲ್ಲಾ. ಆದ್ದರಿಂದ
ನಾನು ಮೊದಲು ಈ‌ ತಂತ್ರಾಂಶದ ಉಪಯೋಗದ ಬಗ್ಗೆ ಓದ ಬೇಕಾಗಿದೆ. ಆದರೆ ಇದಕ್ಕೆ ಬೇಕಾದ ಸಹಾಯ
ಕಡತಗಳು ನನಗೆ ಎಲ್ಲೂ ಸಿಗಲಿಲ್ಲಾ.

ಲಿನಕ್ಸ್ ನಲ್ಲಿ ತಂತ್ರಾಶ ವಿಕಾಸಕರನ್ನು ಹೊರತು ಪಡಿಸಿ ಬರಿ ತಂತ್ರಾಂಶ ಬಳಕೆದಾರರಿಗೆ ಸಹಾಯ
ಕಡತಗಳು ಎಲ್ಲಿವೆ?

 ಮುಖ್ಯವಾಗಿ ನನಗೆ ಕಾಂಟಾಕ್ಟ್ ಉಪಯೋಗದ ಬಗ್ಗೆ ಬೇಕು. ಉದಾಹರಣೆಗೆ RSS Feed, Journal,
Groupware, Synchronization ಇವುಗಳು ಏನು ಎಂಬುದನ್ನು ವಿವರಿಸುವ ಸಹಾಯ ಕಡತಗಳು ಬೇಕು.

ಇತಿ,

ಪರೇಶ
-------------- next part --------------
An HTML attachment was scrubbed...
URL: http://mail.kde.org/pipermail/kde-l10n-kn/attachments/20060707/e5162bbc/attachment.html 


More information about the Kde-l10n-kn mailing list