[Kde-l10n-kn] Account up and running
Umesh Rudrapatna
umeshrs at gmail.com
Mon Jul 28 00:42:45 CEST 2008
ಸ್ನೇಹಿತರೇ ನಮಸ್ಕಾರಗಳು,
ಕೊನೆಗೂ ನನ್ನ svn ಖಾತೆ ಮತ್ತೆ ಕೆಲಸ ಮಾಡಲು ಪ್ರಾರಂಭಿಸಿದೆ. ಅಂತೆಯೇ ಕೆಡಿಇ ೪
ರಲ್ಲಿ ಕನ್ನಡ ಕೂಡಾ ಸುಂದರವಾಗಿ ಮೂಡಿಬರುತ್ತಿದೆ. ಸಧ್ಯಕ್ಕೆ ಶಂಕರಪ್ರಸಾದ್ ಮತ್ತು
ವಿನಯ್ ಬಿಟ್ಟು ಮತ್ತಾರಾದರೂ ಭಾಷಾಂತರಿಸಲು ಸಹಾಯಹಸ್ತ ನೀಡಲು ಸಾಧ್ಯವಿದ್ದಲ್ಲಿ
ದಯವಿಟ್ಟು ತಿಳಿಸಿ. ಮತ್ತು ಆದಿತ್ಯ/ಚಂದನ ರ ಪರಿಚಯ ನನಗೆ ಆಗಿಲ್ಲ. ಸ್ವಲ್ಪ ಕಾಲ
ಭೂಗತನಾಗಿದ್ದ ಕಾರಣವೇನೋ ತಿಳಿಯದು. ನಿಮ್ಮ ಪರಿಚಯವಾದರೆ ಸಂತೋಷ. ನಾನು kde kn_IN ನ
ಹಳಬರಲ್ಲಿ ಒಬ್ಬ. ನನಗೂ ಒಂದು ಡಾಕ್ಟೊರೇಟ್ ಪದವಿ ದೊರೆಯಬಹುದೆಂಬ ಹಂಬಲದಿಂದ ವಯಸ್ಸು
೩೦ ಆದರೂ ಓದುತ್ತಿದ್ದೇನೆ. ಇಷ್ಟು ನನ್ನ ಚುಟುಕು ಪರಿಚಯ. ಶಂಕರ್ ನೀವು ಕಳಿಸಿದ
ಪಟ್ಟಿಯನ್ನು ನೋಡಿ ಇತರರೆಲ್ಲರೂ ಕೆಲಸವನ್ನು ಹಂಚಿಕೊಳ್ಳುತ್ತೇವೆ. ನಾನು ಬಹುಷಃ ನನ್ನ
ಹಳೆಯ ಕಡತಗಳನ್ನೇ ಮುಂದುವರೆಸುತ್ತೇನೆ. ವಿನಯ್ ಗೆ ಸರಳವಾದದ್ದಾವುದನ್ನಾದರೂ ಮೊದಲಿಗೆ
ಕೊಡೋಣ. ಇನ್ನಾರಿಗಾದರೂ ಇತರ ಆಲೋಚನೆಗಳಿದ್ದರೆ ತಿಳಿಸಿ. ಇಲ್ಲದಿದ್ದರೆ, ಇನ್ನೆರಡು
ದಿನಗಳಲ್ಲಿ ನನ್ನ ಕಡತಗಳ ಪಟ್ಟಿ ಹಾಗೂ ವಿನಯ್ ಗೆ ಒಂದು ಚಿಕ್ಕ ಕಡತ
ಕಳುಹಿಸಿಕೊಡುತ್ತೇನೆ. ಕನ್ನಡದಲ್ಲಿ ಈ ಪತ್ರ ಬರೆಯುವುದರೊಳಗೇ ಕಾಲಾಂತರದಲ್ಲಿ
ನೆಲಕಚ್ಚು ತ್ತಿದ್ದ ನನ್ನ ಕನ್ನಡ ಬೆರಳಚ್ಚುಗಾರಿಕೆ ಮತ್ತೆ ಪಟುಗೊಂಡಿತು :-).
ಇಂತಿ,
ಉಮೇಶ
I have finally got my svn account up and running. So, now we can once
again plan and try our best to contribute to kde. Is there anybody
else apart from Shankar Prasad and Vinay wanting to join us for
translations right now? I see a few new names, Aditya and Chandan on
the list of translators. It will be nice if we can know about each
other. I personally have been out of touch for some time so I might
have missed out some earlier mails. Apologies if you have sent mails
already. I am a translator with the team for quite some time now, and
am struggling to see if I can get a PhD :-). Thats my intro in brief.
Shankar, I will go through the list you had sent earlier, regarding
the files you will be translating. I will probably continue with what
I had done earlier. Maybe, we will start off Vinay on something simple
to begin with. Let me know if anybody has any other ideas. Or else,
lets plan on the same lines we had done earlier (may be in a bit more
organized way), this time.
vandanegaLu,
umesh
More information about the Kde-l10n-kn
mailing list