[Kde-l10n-kn] ಹೊಸ konqueror.po
Siddharudh P T
siddharudh at gmail.com
Wed Jul 5 09:21:13 CEST 2006
ನಮಸ್ಕಾರ,
ಈ ಬಾರಿಯ ಅನುವಾದಗಳೂ ತುಂಬಾ ಚೆನ್ನಾಗಿವೆ.
ಸ್ಥಾನ ಬದಲಿಗೆ ತಾಣ - Nice!
Terminal = ಅದೇಶತೆರೆ - Excellent!
History - ನಾನು ಈ ಪದವನ್ನು ಅನುವಾದಿಸುವ ಬಗ್ಗೆ ಈ ಹಿಂದೆ ತುಂಬಾ ಯೋಚಿಸಿದ್ದೇನೆ. "ಇತಿಹಾಸ" ಎಂದು
ಅನುವಾದಿಸದರೆ ಅಷ್ಟು ಸರಿಯಾಗಿರದು ಎಂದು ಸುಮ್ಮನಿದ್ದೆ. "ಹಿನ್ನಲೆ" ಅತೀ ಸೂಕ್ತವಾದ ಅನುವಾದ!
Settings ಪದವನ್ನು kdelibs.poನಲ್ಲಿ ಅನುವಾದಿಸಬೇಕು. ನನಗೆ "ಸಿದ್ಧತೆಗಳು" ಹಾಗೂ "ಸಂಯೋಜನೆಗಳು" ಎರಡೂ
ಪದಗಳು ಸೂಕ್ತವೆನಿಸುತ್ತವೆ. ಹಾಗಾಗಿ ಈ ಪದದ ಅನುವಾದವನ್ನು ನೀವು (ಉಮೇಶ್ ಮತ್ತು ಪರೇಶ್) ಹೇಳಿದ ಹಾಗೆ
ಮಾಡುತ್ತೇನೆ. ನೀವಿಬ್ಬರೂ "ಸಂಯೋಜನೆ" ಎಂಬುದೇ ಅತೀ ಸೂಕ್ತವೆಂದು ಹೇಳಿದರೆ ಅದೇ ಪದವನ್ನು ಇನ್ನು ಮುಂದೆ
ಉಪಯೋಗಿಸೋಣ.
(ಮುಂದಿನ ಎಲ್ಲಾ ಚರ್ಚೆಗಳನ್ನು kde-l10n-kn at kde.orgನಲ್ಲೇ ನಡೆಸೋಣ)
ಇಂತಿ,
ಸಿದ್ಧಾರೂಢ
Tuesday 04 July 2006 23:05ರಂದು ನೀವು ಬರೆದದ್ದು:
> ಯಥಾ ಪ್ರಕಾರ, ಪರಿಷ್ಕರಣೆಗಳೊಂದಿಗೆ.. ಆದರೆ loading ಪದ ಕೆಲವೆಡೆಗಳಲ್ಲಿ ಬದಲಾಯಿಸಲು
> ಸಾಧ್ಯವಾದರೂ, ಕೊಂಚ ಒಗಟೊಗಟಾಗೇ ಇದೆ...
More information about the Kde-l10n-kn
mailing list