[Kde-l10n-kn] ವಿಮರ್ಶೆ kdesktop.po
Paresh A
paresh.kalyan at gmail.com
Mon Jun 26 23:34:15 CEST 2006
ಉಮೇಶರೇ,
ನೀವು ಕೆಡಿಇ mailing list - ಗೆ ಕಳುಹಿಸಿದ mail-ಉ ಬಂದಿದೆ.
ನಾನು kdesktop.po file review ಮಾಡಿದ್ದೀನಿ. ನನಗೆ ಅರ್ಥವಾಗದ/ಸರಿ ಎನಿಸದ ಅನುವಾದಗಳ
ಪಟ್ಟಿ ಹೀಗಿದೆ. ನಾವುು ಸೇರಿದಾಗ ಚರ್ಚಿಸಬಹುದು.
ವಿಮರ್ಶೆಯ ಅನುಕ್ರಮ = ಕ್ರಮಸಂಖ್ಯೆ - ಮೂಲ - ಅನುವಾದ - ವಿಮರ್ಶೆ
4 ಹಾಗೂ ಇನ್ನೂ ಅನೇಕ - Lock - ಬಂಧಿಸು - ಮುಚ್ಚು/ಭದ್ರಪಡಿಸು?
44 - unclutter - ಗೋಚಲು - ಗೋಜಲು?
52, 53 - Line up Horizontally - ಅಡ್ಡವಾಗಿ ಹೊಂದಿಸು - ಅಡ್ಡವಾಗಿ ತೋರಿಸು/ಸರಿ
ಹೊಂದಿಸು?
54 - grid - ಹೆಣಿಗೆ - ಚೌಕ ಬಲೆ/ಚಚ್ಚೌಕ
56 - Desktop - (translation missing)
61ಹಾಗೂ ಇನ್ನೂ ಅನೇಕ - Icon - ಸೂಕ್ಷ್ಮಚಿತ್ರ - ಲಾಂಛನ?
85-reboot- ಮರುಸಜ್ಜುಗೊಳ್ಳು - ಗಣಕ ಪುನರಾರಂಭಿಸು?
88, 89 - does/do not exist - ಲಭ್ಯವಿಲ್ಲ - ಇರುವುದಿಲ್ಲ
97 ಹಾಗೂ ಇನ್ನೂ ಅನೇಕ - realtime - ಕಾಲ ನಿರ್ಬಂಧಿತ (ಇದು time constrained) -
ನಿಜಾವಧಿ
102 - password -ಗುಪ್ತಪದ- ಪ್ರವೇಶ ಪದ
106 ಹಾಗೂ ಇನ್ನೂ ಅನೇಕ - priority - ಪ್ರಾಮುಖ್ಯತೆ ( = importance) - ಆದ್ಯತೆ
116 - URL - ತಾಣ ವಿಳಾಸ (site address) - ಯು ಆರ್ ಎಲ್?
117-120 - settings - ಸಿದ್ಧತೆಗಳು - ದೃಶ್ಯ ವಿನ್ಯಾಸ (In this context)
121 - ತೆರಿಗೆ - ತೆರೆಗೆ
131 - line up - ಹೊಂದಿಸು - ಜೋಡಿಸು/ಸರಿಹೊಂದಿಸು?
134-135 - ಇಲ್ಲಿ ಮೂಲವೇ ಸರಿ ಇಲ್ಲಾ. ಮೌಸ್-ಗೂ ಮೌಸ್ ಪಾಯಿಂಟರ್-ಗೂ ವ್ಯತ್ಯಾಸವೇ ಇಲ್ಲಾ.
ಬಹಳ ತಮಾಷೆಯಾಗಿದೆ. (Original suggests as if you physically lift mouse and move
mouse wheel over monitor screen:))
136-137 - Terminal application - ಪ್ರದರ್ಶಕಾನ್ವಯಿಕ - ಪ್ರದರ್ಶಕಾನ್ವಯ?
138, 142-Button-ಬಟನ್- ಗುಂಡಿ
145 - typing error
147, 148 - ವಾಕ್ಯ ರಚನೆ - ......ಬಳಸಲಾಗಿರುವ ಪಠ್ಯ ಬಣ್ಣ.
153 - Align direction - ದಿಕ್ಕು ಹೊಂದಿಸು - ಜೋಡಣಾ/ಸರಿಹೊಂದಿಸ ಬೇಕಾದ
ದಿಕ್ಕು
155-ತೊರಿಸು - ತೋರಿಸು
156 - image - (missing) - ಚಿತ್ರ
161-162 - Device Type - ಸಾಧನ ವಿಧಾನ/ಕ್ರಮ - ಸಾಧನ ಪ್ರಭೇಧ?
172 - movies - ನಿರೂಪಣೆ - ಚಲನಚಿತ್ರ?
ಬಹುವಚನ ಉಪಯೋಗಿಸಿದರೆ ಲಿಂಗದ ತೊಂದರೆ ಬರುವುದಿಲ್ಲಾ.
ಉದಾಹರಣೆಗೆ :
100 - User name - ಬಳಕೆದಾರನ/ಳ ಹೆಸರು - ಬಳಕೆದಾರರ ಹೆಸರು
ಇಂತಿ,
ಪರೇಶ
On 6/20/06, Umesh RS <umeshrs at gmail.com> wrote:
>
> ಸ್ನೇಹಿತರೆ,
> ನಾನು ತರ್ಜುಮೆ ಮಾಡಬೇಕಿದ್ದ ಇತರ ಕಡತಗಳನ್ನು ಕಳುಹಿಸುತ್ತಿದ್ದೇನೆ. ಹಲವಾುರು ಹೊಸ ಪದಗಳು
> ಹಾಗೂ ಬಗಲಾವಣೆಗಳಾಗಬೇಕಿವೆ. ಪರೇಶನೊಂದಿಗೆ ಚರ್ಚಿಸಿ ಅಗತ್ಯ ಬದಲಾವಣೆಗಳನ್ನು ಮಾಡುತ್ತೇನೆ.
> ನಂತರ ಇತರರು ಕೈಗೆತ್ತಿಕೊಳ್ಳದ ಕಡತವನ್ನು ತರ್ಜುಮಿಸಲು ತೊಡಗುತ್ತೇನೆ. ಪರೇಶ್, ನೀನು
> ಹೇಳಿದಂತೆ ಹೊಸ ಪದಗಳ ಪಟ್ಟಿಯೊಂದನ್ನು ಮಾಡಿದ್ದೇನೆ/ಮಾಡುತ್ತಿದ್ದೇನೆ. ಸಮಯವಾದಾಗ
> ಅವುಗಳನ್ನು ಒಮ್ಮೆ ನೋಡೋಣವಾಗಲಿ.
> ಇಂತಿ,
> ಉಮೇಶ್
>
> _______________________________________________
> Kde-l10n-kn mailing list
> Kde-l10n-kn at kde.org
> https://mail.kde.org/mailman/listinfo/kde-l10n-kn
>
>
>
>
-------------- next part --------------
An HTML attachment was scrubbed...
URL: http://mail.kde.org/pipermail/kde-l10n-kn/attachments/20060627/c769a554/attachment.html
More information about the Kde-l10n-kn
mailing list