ಮಿತ್ರರೇ,

Localization ಬಗ್ಗೆ ನನ್ನ ಕೆಲವು ಸಲಹೆಗಳು ಇಂತಿವೆ. ಸಿದ್ದಾರೂಢರು ಇಲ್ಲಿಗೆ ಬಂದಾಗ ವಿವರವಾಗಿ ಚರ್ಚಿಸಬಹುದು...

೧) ಪ್ರತಿ ಕಡತದ ಅನುವಾದ ಮುಗಿದಮೇಲೆ ಅದನ್ನು ವಿಮರ್ಶೆಗಾಗಿ ಈ mail id-ಗೆ ಕಳುಹಿಸುವುದು
೨)ಅನುವಾದಿಸಿದ .po ಕಡತದ ಜೊತೆ ಅನುವಾದಕರು ಮತ್ತೊಂದು .po ಕಡತ ಕಳುಹಿಸಬೇಕು. ಈ ಹೊಸ ಕಡತ ಮೂಲ ಕಡತದ ಅನುವಾದದಲ್ಲಿ ಉಪಯೋಗಿಸಿದ ಹೊಸ ಪದಗಳನ್ನು ಮಾತ್ರ ಹೊಂದಿರಬೇಕು. ವಿಮರ್ಶಕರು ಈ ಎರಡು ಕಡತಗಳನ್ನು ಒಪ್ಪಬೇಕು. ಹೊಸ ಕಡತದ ಹೆಸರು new_ ಯಿಂದ ಪ್ರಾರಂಭವಾಗಿ ಮೂಲ ಕಡತದ ಹೆಸರನ್ನು ಕೊನೆಯಲ್ಲಿ ಸೇರಿಸಬೇಕು. ಈ ಹೊಸ ಕಡತದ ಉದ್ದೇಶ ಎರಡು - ಇದನ್ನು ನಮ್ಮ  kbabel  dictionary -ಗೆ ಸೇರಿಸಬಹುದು.  kbabel-ನಲ್ಲಿ  search option substrings ಹುಡುಕುತ್ತಾ ಇಲ್ಲಾ. ಇನ್ನೊಂದು ಉದ್ದೇಶ, ಈ ಕಡತವನ್ನು ಯಾವುದೇ ಭಾಷಾ ಪಂಡಿತರ ಬಳಿ ತೋರಿಸಿ ಅವರ ಸಲಹೆ/ಅಭಿಪ್ರಾಯ ಕೇಳಲು ಅನುಕೂಲ.

೩) ವಿಮರ್ಶಕರು ಸೂಚಿಸಿದ ಮಾರ್ಪಾಡುಗಳನ್ನು ಮಾಡಿದ ಮೇಲೆ .mo ಕಡತ ಮಾಡಿ linux-ನಲ್ಲಿ run-ಮಾಡಿ ಪರೀಕ್ಷೀಸಬೇಕು. ಇಲ್ಲಿ ಪುನಃ ಯಾವುದಾದರು ಮಾರ್ಪಾಟುಗಳು ಬೇಕಾದರೆ ಮಾಡಬೇಕು.
೪) ನಂತರ ಎರಡು ಕಡತಗಳನ್ನೂ ಎಲ್ಲರಿಗೂ ಕಳುಹಿಸಬೇಕು. ಈ ಅಂತಿಮ ಕಡತ ಪ್ರತಿಯನ್ನು ಎಲ್ಲರೂ ತಮ್ಮ ಪದಕೋಶಗಳಿಗೆ ಸೇರಿಸಿಕೊಳ್ಳಬೇಕು.

೫) ವಾರಕೊಮ್ಮೆ ಅಥವಾ ಪಕ್ಷಕೊಮ್ಮೆ svn commit ಮಾಡಬೇಕು.

ಇವೆಲ್ಲಾ ನನ್ನ ಬಿಟ್ಟಿ ಸಲಹೆಗಳು..... :) ಚರ್ಚಿಸಿ ನಿರ್ಧಾರ ತೆಗೆದು ಕೊಳ್ಳಬಹುದು.

ಮತ್ತೊಂದು ವಿಷಯ...
ನಾನು ಪ್ರಸಾರಂಗದ ಆಂಗ್ಲ-ಕನ್ನಡ ಶಬ್ದಕೋಶದ ಮುದ್ರಿಕೆ (ಸಿಡಿ) ಕೊಂಡಿದ್ದೇನೆ. ನಮಗೆ ಇದು ತುಂಬಾ ಸಹಕಾರಿಯಾಗಬಹುದು.

ನನ್ನ ಪಾಲಿನ ಕಡತಗಳನ್ನು ಕಳುಹಿಸುವುದರಲ್ಲಿ ತಡವಾಗಿದ್ದಕ್ಕೆ ಕ್ಷಮಿಸಿ.

ಇಂತಿ,
ಪರೇಶ